ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಕಲಾಭಿಮಾನಿಗಳಿಂದಲೇ ಗಂಡುಕಲೆ ಉಳಿಯಲು ಸಾಧ್ಯ : ಎನ್‌. ಆರ್‌. ರಾವ್‌

ಲೇಖಕರು : ಉದಯವಾಣಿ
ಭಾನುವಾರ, ಫೆಬ್ರವರಿ 2 , 2014
ಪದವೀಧರ ಯಕ್ಷಗಾನ ಸಮಿತಿ (ರಿ.) ತನ್ನ 40ನೇ ವರ್ಷಚರಣೆಯ ಪ್ರಯುಕ್ತ ಮಹಾನಗರ ಮತ್ತು ಉಪನಗರ, ನವಿ ಮುಂಬಯಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ನಿರಂತರವಾಗಿ ನಡೆಸಲ್ಪಟ್ಟ ಐದು ದಿನಗಳ ಯಕ್ಷಗಾನ ಸಮ್ಮೇಳನ ಕಾರ್ಯಕ್ರಮವು ಜ. 26 ರಂದು ಸಮಾಪ್ತಿಗೊಂಡಿತು.

ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ, ಶ್ರೀ ಪೇಜಾವರ ಮಠ, ನವಿಮುಂಬಯಿ ಕನ್ನಡ ಸಂಘ ವಾಶಿ, ಶ್ರೀ ಅಂಬಿಕಾ ದೇವಸ್ಥಾನ ವಿದ್ಯಾ ವಿಹಾರ್‌, ಬಿ. ಎಸ್‌. ಕೆ. ಬಿ. ಅಸೋಸಿಯೇಶನ್‌ ಸಯನ್‌ ಸಹಯೋಗದೊಂದಿಗೆ ಯಕ್ಷಗಾನ ಸಮ್ಮೇಳನ, ಯಕ್ಷಗಾನ ತಾಳಮದ್ದಳೆ, ಕಮ್ಮಟವನ್ನು ಆಯೋಜಿಸಿತ್ತು.

ಸಾಯನ್‌ನ ಬಿಎಸ್‌ಕೆಬಿ ಅಸೋಶಿಯೇಶನ್‌ನ ಗೋಕುಲದಲ್ಲಿ ನಡೆಸಲಾಗಿದ್ದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಾರಾಯಣಾಮƒತ ಫೌಂಡೇಶನ್‌ನ ಸಂಸ್ಥಾಪಕ ನ್ಯಾಯವಾದಿ ಎನ್‌. ಆರ್‌. ರಾವ್‌ ಅವರು ವಹಿಸಿದ್ದು, ಅತಿಥಿಗಳಾಗಿ ಎಂ. ಎಲ್‌. ಸಾಮಗ, ಪೊಲ್ಯ ಉಮೇಶ್‌ ಶೆಟ್ಟಿ, ನೆಡ್ಡೆ ರಾಮಭಟ್‌, ಡಾ| ರಮಾನಂದ ಬನಾರಿ ಅವರು ಉಪಸ್ಥಿತರಿದ್ದರು.

ಎನ್‌. ಆರ್‌. ರಾವ್‌ ಅಧ್ಯಕ್ಷೀಯ ಭಾಷಣಗೆ„ದು ಯಕ್ಷಗಾನದ ಅಗಲಿದ ಕಲಾಕಾರರು, ಸಂಘಟಕರ ಸ್ಮರಣೆಗೆ„ಯುತ್ತಾ ಪಾರಂಪರಿಕವಾದ ಯಕ್ಷಗಾನವನ್ನು ಉಳಿಸುತ್ತಿರುವ ಎಚ್‌. ಬಿ. ಎಲ್‌. ರಾವ್‌ ಅವರ ಕಾರ್ಯಪ್ರವೃತ್ತಿಯನ್ನು ಸ್ಮರಿಸಿದರು. ನಮ್ಮ ಸಂಸ್ಕೃತಿ ಜೀವಂತವಾಗಿ ಉಳಿಯುವಲ್ಲಿ ಯಕ್ಷಗಾನ ಕಲೆಯ ಪಾತ್ರವೂ ಮಹತ್ತರವಾಗಿದೆ. ಇಂತಹ ಗಂಡುಕಲೆಯ ಉಳಿವು ಕಲಾಕಾರರ ಮತ್ತು ಕಲಾಭಿಮಾನಿಗಳ ಒಗ್ಗೂಡುವಿಕೆಯಿಂದ ಆಗಬೇಕಾಗಿದ್ದು, ಗತಕಾಲದ ಯಕ್ಷಗಾನ ವೈಭವದ ನೆನಹುಗಳನ್ನು ಮೆಲುಕು ಹಾಕಿದಾಗ ನಾಡಿನ ಸುಂಸ್ಕೃತ ಕಲೆಗಳನ್ನು ಜೀವಂತವಾಗಿರಿಸಲು ಸಾಧ್ಯವಿದೆ. ಇದರಲ್ಲಿ ಕಲಾ ಸಂಘಟಕರ ಪಾತ್ರವೂ ಪ್ರಮುಖವಾಗಿದೆ ಎಂದರು.

ಬೆಳಿಗ್ಗೆ ಶತಮಾನದ ಸಂಸ್ಮರಣೆ ಮತ್ತು ತಾಳಮದ್ದಳೆ ಕಾರ್ಯಕ್ರಮ ಜರಗಿಸಲಾಗಿದ್ದು ಹಿರಿಯ ಯಕ್ಷಗಾನ ಭಾಗವತ ಪೊಲ್ಯ ದೇಜಪ್ಪ ಶೆಟ್ಟಿ ಬಗ್ಗೆ ಹೆಚ್‌ಬಿಎಲ್‌ರಾವ್‌, ಯಕ್ಷಗಾನದ ಕಲಾಪೋಷಕ ರಾಮ ನಾಯಕ್‌ ಕುರಿತು ಮಧುಸೂದನ್‌ ರಾವ್‌, ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ಶಂಕರ್‌ ನಾರಾಯಣ ಸಾಮಗ ಬಗ್ಗೆ ಡಾ| ರಮಾನಂದ ಬನಾರಿ, ಪ್ರಸಿದ್ಧ ಮದ್ದಳೆಗಾರ ಗುರಿಕಾರ ನಡ್ಡೆ ನರಸಿಂಹ ಭಟ್‌ ಕುರಿತು ಸತ್ಯಾನಂದ ರಾವ್‌ ಪೇಜಾವರ, ಹಿರಿಯ ಖ್ಯಾತ ಪ್ರಸಂಗಕರ್ತ ಕಿರಿಕ್ಕಾಡು ಮಾಸ್ಟರ್‌ ವಿಷ್ಣು ಭಟ್‌ ಅವರ ಬಗ್ಗೆ ಮೂಡುಬೆ„ಲು ಗೋಪಾಲಕೃಷ್ಣ ಶಾಸ್ತ್ರಿ ಅವರುಗಳು ಅವರವರ ಕಾಲದ ಗತವೈಭವಗಳ ಕುರಿತು ಮತ್ತು ಸಿದ್ಧಿ ಸಾಧನೆಯ ಬಗ್ಗೆ ಸಂಸ್ಮರಣೆಗೆ„ದರು. ಯಕ್ಷಗಾನ ಭಾಗವತರಾದ ದಯಾಮಣಿ ಶೆಟ್ಟಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ರಂಗದ ಹಿರಿಯ ಪ್ರಬುದ್ಧ ಕಲಾವಿದರಾದ ಶೇಣಿ ಶ್ಯಾಮರಾವ್‌, ಡಾ| ರಮಾನಂದ ಬನಾರಿ, ಸತ್ಯಾನಂದ ರಾವ್‌ ಪೇಜಾವರ, ಅಶೋಕ್‌ಭಟ್‌ ಉಜಿರೆ, ನೆಡ್ಡೆ ರಾಮಭಟ್‌ ಅವರು ಜಯಪ್ರಕಾಶ್‌ ನಿಡ್ಡಣ್ಣಾಯ ಮತ್ತು ಜಯಲಕ್ಷಿ¾à ದೇವಾಡಿಗ ಅವರ ಭಾಗವತಿಕೆಯಲ್ಲಿ 'ಅಂಗದ ಸಂಧಾನ' ತಾಳಮದ್ದಳೆ ಪ್ರಸ್ತುತ ಪಡಿಸಿದರು.

ಎಸ್‌. ಕೆ. ಸುಂದರ್‌ ಅವರು ಸ್ವಾಗತಿದರು. ಹಿರಿಯ ಕಲಾ ಸಂಘಟಕರೂ, ಪದವೀಧರ ಯಕ್ಷಗಾನ ಸಮಿತಿಯ ಅಧ್ಯಕ್ಷರೂ ಆದ ಎಚ್‌. ಬಿ. ಎಲ್‌. ರಾವ್‌ ಪ್ರಾಸ್ತವಿಕ ನುಡಿಗಳನ್ನಾಡಿದರು. ನ್ಯಾಯವಾದಿ ಅಮಿತಾ ಭಾಗÌತ್‌ ಅವರು ಕಾರ್ಯಕ್ರಮ ನಿರೂಪಿಸಿದ‌ರು.

ನವಿ ಮುಂಬಯಿಯ ಕನ್ನಡ ಸಂಘದ ಸಭಾಗƒಹದಲ್ಲಿ ಜ. 22 ರಂದು ಪ್ರಸಿದ್ಧ ಯಕ್ಷಗಾನ ಭಾಗವತ ಪೊಲ್ಯ ಲಕ್ಷಿÉàನಾರಾಯಣ ಶೆಟ್ಟಿ ಅವರು ಸರಣಿ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಿದ್ದು, ಕನ್ನಡ ಸಂಘದ ಸಂಯೋಜನೆಯೊಂದಿಗೆ 'ದಶವತಾರ' ಯಕ್ಷಗಾನ ತಾಳಮದ್ದಳೆ ನೆರವೇರಿಸಿತ್ತು. ಮರುದಿನ ಸಾಂತಾಕ್ರೂಜ್‌ನ ಪೇಜಾವರ ಮಠದ ಸಭಾಗƒಹಲ್ಲಿ ಮಠದ ಸಹಯೋಗದಲ್ಲಿ 'ಶಲ್ಯ ಸಾರಥ್ಯ ಶಲ್ಯ ಪರ್ವ' ತಾಳಮದ್ದಲೆ ನಡೆಸಿತು.

ಜ. 25 ರಂದು ವಿದ್ಯಾವಿಹಾರ್‌ನ ಅಂಬಿಕಾ ದೇವಸ್ಥಾನದಲ್ಲಿ ವೇದಮೂರ್ತಿ ಪೆರ್ಣಂಕಿಲ ಹರಿದಾಸ್‌ ಭಟ್‌ ಅವರ ಅಧ್ಯಕ್ಷತೆಯಲ್ಲಿ ನುಡಿನಮನ ಕಾರ್ಯಕ್ರಮ ನಡೆಸಲಾಗಿದ್ದು, ಯಕ್ಷಗಾನದ ಹಿರಿಯ ಕಲಾವಿದರಾದ ಪಂಡಿತ ಪೆರ್ಲ ಕೃಷ್ಣ ಭಟ್‌ ಬಗ್ಗೆ ಎಂ. ಎಲ್‌. ಸಾಮಗ ಹಾಗೂ ಪಕಳಕುಂಞ ಕೃಷ್ಣ ನಾಯಕ್‌ ಬಗ್ಗೆ ಉಜಿರೆ ಅಶೋಕ್‌ ಭಟ್‌ ಸಂಸ್ಮರಣೆಗೆ„ದರು. ಶೇಣಿ ಶ್ಯಾಮರಾವ್‌ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅಂಬಿಕಾ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಸಹಯೋಗದೊಂದಿಗೆ 'ಕಚದೇವಯಾನಿ' ಮತ್ತು 'ರಾವಣ ಮೋಕ್ಷ' ಯಕ್ಷಗಾನ ತಾಳಮದ್ದಳೆ ನಡೆಯಿತು.



ಕೃಪೆ : http://www.udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ